ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಸಿದ್ಧಕಟ್ಟೆಯ ಯಕ್ಷರ ಚೆನ್ನ ವರುಷದ ನೆನಪು

ಲೇಖಕರು :
ದಯಾಮಣಿ ಎಸ್‌. ಶೆಟ್ಟಿ ಎಕ್ಕಾರು
ಭಾನುವಾರ, ಮಾರ್ಚ್ 29 , 2015
ಮಾರ್ಚ್ 28, 2015

ಸಿದ್ಧಕಟ್ಟೆಯ ಯಕ್ಷರ ಚೆನ್ನ ವರುಷದ ನೆನಪು

ಮುಂಬಯಿ : ಯಕ್ಷಲೋಕದ ಅಣ್ಣ ಸಿದ್ಧಕಟ್ಟೆಯ ಯಕ್ಷರ ಚೆನ್ನ ಇದೀಗ ವರುಷದ ನೆನಪು ಮಾತ್ರ. ಮಾ. 20 ರಂದು ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರು ಯಕ್ಷಲೋಕವನ್ನು ಅಗಲಿ ಒಂದು ವರ್ಷ ಕಳೆಯಿತು. ಬಾಳ ಪಯಣದಲ್ಲಿ ಮುಳ್ಳಿನ ದಾರಿಯನ್ನೂ, ಹೂವಿನ ಹಾದಿಯನ್ನಾಗಿಸಿ ಜೀವನದಲ್ಲಿ ಯಕ್ಷಗಾನ ಕ್ಷೇತ್ರವೇ ತನ್ನುಸಿರು, ಉಸಿರು ಇರುವವರೆಗೆ ಯಕ್ಷಗಾನ ರಂಗವೇ ತನ್ನ ಮನೆಯೆಂದು ಸದಾ ಮನದೊಳು ಯಕ್ಷಗಾನವನ್ನೇ ಆರಾಧಿಸಿ ಪೂಜಿಸುತ್ತಿದ್ದ ಚೆನ್ನಪ್ಪ ಶೆಟ್ಟಿ ಅವರ ನೆನಪು ನಮಲ್ಲಿ ಅಜರಾಮರ.

ದೈವಂ ಮಂತ್ರಾಧೀನಂಣ ಮಂತ್ರ ಬ್ರಾಹ್ಮಾಣಾಧೀನಂಣ ಎಂಬಂತೆ ಸಂಸ್ಕೃತ ಶ್ಲೋಕಗಳು ಭಗವಂತನ ಆರಾಧನೆಯ ಮೂಲ ಮಂತ್ರಗಳು. ಅಂತಹ ಸಂಸ್ಕೃತ ಭಾಷೆಯನ್ನು, ಅದರ ಪಾಂಡಿತ್ಯವನ್ನು ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಕರಗತ ಮಾಡಿಕೊಂಡು ಅದನ್ನು ಯಕ್ಷರಂಗದಲ್ಲಿ ನಿರರ್ಗಳವಾಗಿ ಬಳಸಿ ಶುದ್ಧ ಭಾಷಾ ಸಾಹಿತ್ಯವನ್ನು ಉಳಿಸಿಕೊಂಡು ಬಂದು ಅದ್ಭುತ ಸಾಧನೆಯನ್ನು ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದ ಪುಣ್ಯಾತ್ಮ ಇಂದು ಎಲ್ಲರ ಪಾಲಿಗೆ ಸದಾ ಸ್ಮರಣೀಯರಾಗಿದ್ದಾರೆ.

ಅಜೆಕಾರು ಕಲಾಭಿಮಾನಿ ಬಳಗದಲ್ಲಿ ಮುಂಬಯಿ ಮಹಾನಗರದಲ್ಲಿ ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆದು ಕಲಾರಾಧಕರ ಮನದಲ್ಲಿ ಸ್ಥಾನವನ್ನು ಸ್ಥಾಪಿಸಿಕೊಂಡ ಯಕ್ಷಗಾನ ದಿಗ್ಗಜರಾಗಿದ್ದಾರೆ ಎಂಬುವುದಕ್ಕೆ ಸಾಕ್ಷಿ ಅವರ ಮರಣಾನಂತರ ಪ್ರಕಟಿಸಿದ ಯಕ್ಷರ ಚೆನ್ನ ಗ್ರಂಥವೇ ಸರಿ. ಯಕ್ಷಗಾನದ ಗುರು, ಯುವ ಕಲಾವಿದ, ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಾನೋರ್ವ ಕಲಾವಿದರಾಗಿದ್ದು, ಇನ್ನೋರ್ವ ಕಲಾವಿದನನ್ನು ಗುರುತಿಸಿ ಅವರಿಗೆ ಸಲ್ಲಿಸಿದ ಈ ಗ್ರಂಥವು ಅವರ ಆತ್ಮಾಭಿಮಾನದ ಹೆಗ್ಗುರುತಾಗಿದೆ. ಅದಲ್ಲದೆ ಚೆನ್ನಪ್ಪ ಶೆಟ್ಟಿ ಅವರಲ್ಲಿ ಅದೇನೋ ವೈಶಿಷ್ಟÂವನ್ನು ಕಂಡುಕೊಂಡು ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ಬಾಲಕೃಷ್ಣ ಶೆಟ್ಟಿ ಅವರು ನಿಜಕ್ಕೂ ಹಲವು ಜನರ ಪ್ರೋತ್ಸಾಹದಿಂದ ಯಕ್ಷರ ಚೆನ್ನ ಗ್ರಂಥವನ್ನು ಬಿಡುಗಡೆಗೊಳಿಸಿದ ಸಾಧಕ.

ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರು ಕಲಾಮಾತೆಗೆ ಪ್ರಿಯರಾದರು. ಕಲಾಮಾತೆ ತನ್ನ ಯಕ್ಷಲೋಕದ ಕಂದ ಇಳೆಯಲ್ಲಿ ಸಾಧಿಸಿದ್ದು ಸಾಕು, ಇನ್ನು ಅವನು ನನಗೆ ಬೇಕು ಎಂದು ತನ್ನಲ್ಲಿಗೆ ಸೆಳೆದೊಯ್ದಳು. ಆ ಮಾತೆಗೆ ಪ್ರಿಯನಾದ ಯಕ್ಷಲೋಕದ ಅಣ್ಣ ಸಿದ್ದಕಟ್ಟೆಯ ಯಕ್ಷರ ಚಚೆನ್ನ ಕೃಷ್ಣನಾಗಿ ಸದಾ ಕೈಯಲ್ಲಿ ಪಾಂಚಜನ್ಯಧಿಶ್ಲೋಕಗಳ ರಾಜಧಿಯಕ್ಷರಂಗದ ವಿರಾಟನಿಗೆ ವರುಷದ ಭಾಷ್ಪಂಜಲಿ ಮುಂಬಯಿ ಕಲಾಭಿಮಾನಿಗಳದ್ದು. ಅವರು ಮತ್ತೂಮ್ಮೆ ಹುಟ್ಟಿ ಬರಲಿ. ಯಕ್ಷಗಾನ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುವುದು ನಮ್ಮ ಆಶಯ.





ಕೃಪೆ : http://udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ